ತಾಮ್ರ ಚಂದ್ರೋದಯ!!

ಜನವರಿ 31ರಂದು  ಚಂದ್ರೋದಯದ ಸಮಯದಲ್ಲಿ ಪೂರ್ಣ ಚಂದ್ರಗ್ರಹಣ ಸಂಭವಿಸಿ ತಾಮ್ರ ಬಣ್ಣದ  ಚಂದ್ರ ಗೋಚರಿಸಲಿದ್ದಾನೆ.
ಈ ಚಂದ್ರಗ್ರಹಣದ ವೀಕ್ಷಣೆಯಲ್ಲಿ ಯಾವ ಅಪಾಯವೂ ಇಲ್ಲ. ಉಪಕರಣಗಳೂ ಬೇಕಿಲ್ಲ.
ಪೂರ್ವಸಿದ್ಧತೆ ಮಾಡುವುದು ಮುಖ್ಯ.
ಪೂರ್ವ ದಿಕ್ಕಿನಲ್ಲಿ ಯಾವುದೇ ಅಭ್ಯಂತರವಿಲ್ಲದೆ
ಚಂದ್ರೋದಯ ಕಾಣುವಂತಹ ಜಾಗವನ್ನು ಆಯ್ದುಕೊಂಡು ಬಯಲೂಟ ಸಿದ್ಧತೆ ಮಾಡಿ ಸಂಜೆಯ 6:15 ಘಂಟೆಗೆ ಉಪಸ್ಥಿತರಾಗಿರಿ!

ಪೂರ್ಣ ಚಂದ್ರಗ್ರಹಣ ಸಂಜೆಯ 6:22ರಿಂದ 7:37ರ (IST) ವರೆಗೆ ಸಂಭವಿಸವಲಿದೆ. ನಂತರ 2ಘಂಟೆಗಳ ಕಾಲ ಪಾರ್ಶ್ವ ಚಂದ್ರಗ್ರಹಣ ಸಂಭವಿಸವಲಿದೆ.
ಸೌರವ್ಯೂಹ, ಗ್ರಹಣ, ಬೆಳಕಿನ ಭೌತಶಾಸ್ತ್ರ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಇದು ಉತ್ತಮ ಅವಕಾಶ.
ವೀಕ್ಷಣೆಯ ವ್ಯವಸ್ಥೆಯನ್ನು ಯಾರೂ ಮಾಡಬಹುದು.

ಈ ಅನನ್ಯ ಅವಕಾಶವನ್ನು ಆದಷ್ಟು ಜನರ ಗಮನಕ್ಕೆ ತನ್ನಿ !

ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗಳನ್ನು ಸಂದರ್ಶಿಸಿ:

https://coppermoon18.wordpress.com

ಮತ್ತು

https://www.iiap.res.in//people/personnel/pshastri/grahana/grahana.html

Advertisements